ಮೇ ೧೦ - ಮೇ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೦ನೇ (ಅಧಿಕ ವರ್ಷದಲ್ಲಿ ೧೩೧ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೭೭೪ - ಹದಿನಾರನೇ ಲೂಯಿ, ಫ್ರಾನ್ಸ್‌‌ನ ಚಕ್ರವರ್ತಿಯಾದನು. ೧೮೫೭ - ಮೀರತ್‌ನಲ್ಲಿ ಸಿಪಾಯಿಗಳು ದಂಗೆಯೆದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರಾರಂಭಿಸಿದರು. ೧೮೭೭ - ರೊಮೇನಿಯ ಟರ್ಕಿಯಿಂದ ಸ್ವಾತಂತ್ರ್ಯ ಘೋಷಿಸಿತು. ೧೯೪೦ - ವಿನ್‌ಸ್ಟನ್ ಚರ್ಚಿಲ್ ಯುನೈಟೆಡ್ ಕಿಂಗ್‍ಡಮ್‌ನ ಪ್ರಧಾನಮಂತ್ರಿಯಾದರು. ೧೯೯೪ - ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ರಾಷ್ಟ್ರಪತಿಯಾದರು. == ಜನನ == ೧೮೩೮ - ಜಾನ್ ವಿಲ್ಕಿಸ್ ಬೂತ್, ಅಮೇರಿಕ ದೇಶದ ರಾಷ್ಟ್ರಪತಿ ಅಬ್ರಹಂ ಲಿಂಕನ್‌ನ ಹತ್ಯೆಗಾರ. ೧೯೩೧ - ಹಿರಿಯ ಸಂಶೋಧಕ,ಸಾಹಿತಿ ಎಂ.ಚಿದಾನಂದಮೂರ್ತಿ. == ನಿಧನ == ೧೯೩೬ - ಸ್ವಾತಂತ್ರ್ಯ ಹೋರಾಟಗಾರ ಡಾ.ಮುಕ್ತಾರ್ ಅಹ್ಮದ್ ಅನ್ಸಾರಿ. ೨೦೧೦-ಹಿಂದಿ ಚಿತ್ರರಂಗದ ಹೆಸರಾಂತ, ಶ್ವಾಶಕೋಶದ ಕ್ಯಾನ್ಸರ್ ನಿಂದ ನರಳುತ್ತಿದ್ದ ಪೋಷಕನಟ, ಮ್ಯಾಕ್ ಮೋಹನ್, ಮುಂಬೈನ ಅಂಧೇರಿಯ ಕೋಕಿಲಾ ಬೆನ್, ಆಸ್ಪತ್ರೆಯಲ್ಲಿ, ನಿಧನರಾದರು. ಮೃತರಿಗೆ ೭೧ ವರ್ಷವಯಸ್ಸಾಗಿತ್ತು. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ